jayzine2023 images

Discover Best jayzine2023 Images of World

#food #travel #sports #news #may #saturday

Buckle up, because we're back with another round of ||SHABD||! Gaze upon this herd of ecstatic volunteers. Their excitement could power a small city, and their unwavering commitment alleviates a significant burden. Get ready to showcase those amazing skills, have more fun than you would at the most exuberant amusement park, and of course, work with us awesome folks (let's admit it, we're pretty cool). We truly appreciate everyone who joined us today. For those who couldn't make it, you can join us directly at the Mechanical Auditorium from 5:30 PM onwards. . . . ಇಬ್ಬನಿಯ ಮಬ್ಬಿನಲಿ ಹೊಂಬಿಸಿಲಿನ ಕಿರಣಗಳು ಏಳುವಂತೆ, ಕಾಲೇಜಿನ ಒತ್ತಡದ ನಡುವೆ ಗಮ್ಮತ್ತು ನೀಡಲು ಮೋಜು-ಮಸ್ತಿಯೊಂದಿಗೆ ಕೂಡಿದ ಕಲಾ-ಸಾಹಿತ್ಯಿಕ ಪರ್ವ ||ಶಬ್ದ್||-2024 ಸಜ್ಜಾಗುತ್ತಿದೆ. ವಸಂತದ ಆಗಮನಕ್ಕೆ ಮಾಮರವು ಕಾಯುವಂತೆ, ಈ ಭರ್ಜರಿ ಉತ್ಸವದಲ್ಲಿ ಭಾಗಿಯಾಗಲು ಉತ್ಸುಕತೆಯಿಂದ ಕಾಯುತ್ತಿರುವ ತಮಗೆಲ್ಲರಿಗು ಸ್ವಾಗತ ಸುಸ್ವಾಗತ ಹಾಗು ||ಶಬ್ದ್||-2024ರ ತಯಾರಿಯಲ್ಲಿ ನಮ್ಮೊಂದಿಗೆ ಕೈಜೋಡಿಸಲು ಸಿದ್ಧರಾಗಿರುವ ಸ್ವಯಂಸೇವಕರಿಗೆ ತುಂಬು ಹೃದಯದ ಧನ್ಯವಾದಗಳು. ಹರಟೆ ಹೊಡೆಯುತ್ತಾ, ಬಣ್ಣಗಳೊಡನೆ ಆಟವಾಡುತ್ತಾ, ಕಲಾ-ಸಾಹಿತ್ಯದೊಂದಿಗೆ ಜೀವಿಸೋಣವೇ? . . . #shabd2023 #jayzine2023 #jssstu #shabdiscoming #art #jcedboard #competitions #mysuru #mysore #sjce #quiz #debate #poetry #creativewriting #kannada #english #painting #sketching #photography #literary #literaryfest #ashteashte #volunteer #volunteering

4/17/2024, 2:26:11 PM

It's been a week since ||SHABD|| - 2023 has come to an end and The Editorial Board would like to extend its gratitude towards everyone who helped make it a grand success! The 17th edition of our annual literary fest was marked by a unique distinction because we had not one, but two extraordinary chief guests! We are extremely grateful to Mr Baadal Nanjundaswamy for joining the inauguration and marking the release of Jayzine 2023. We are very grateful to Mr Hiremagaluru Kannan for having graced the valedictory event and closing it on a high note. We are thankful to the college management and staff for their unwavering support and guidance. We are grateful to the enthusiastic participants of all the competitions held during the weekend. We are immensely grateful to all the volunteers who helped with the preparation for and during the events of ||SHABD||. We hope that this year's ||SHABD|| gave you all something to cherish — experiences, memories, prizes or new friends. We extend a huge Thank You to everyone who has been a part of it. Until next time! . ಆಗಸದಿ ಮಂಜಿನ ಮುಸುಕು ಕರಗಿ, ಆದಿತ್ಯನ ಪ್ರಭೆಯು ಧರಿತ್ರಿಯ ಉದ್ದಗಲವ ಪ್ರಕಾಶಿಸಿ, ದಟ್ಟ ಕಾನನದ ಜೀವಕೋಶಗಳಿಗೆ ಚೈತನ್ಯವ ಉಣಿಸುವಂತೆ; ||ಶಬ್ದ್|| - 2023 ಎಲ್ಲರಲ್ಲೂ ನವ ಉತ್ಸಾಹವನ್ನು ತುಂಬಿತು. ಈ ಉತ್ಸಾಹಭರಿತ ಉತ್ಸವಕ್ಕೆ ಕಾರಣಿಭೂತರಾದ ಎಲ್ಲರಿಗು ಸಂಪಾದಕ ಮಂಡಳಿಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು. ಜೂನ್ 10 ಮತ್ತು 11ರಂದು ನಡೆದ ಈ ಕಲಾ-ಸಾಹಿತ್ಯಿಕ ಪರ್ವದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ, ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದ, ಸುಪ್ರಸಿದ್ಧ ಕಲಾವಿದರಾದ ಶ್ರೀಯುತ ಬಾದಲ್ ನಂಜುಂಡಸ್ವಾಮಿ ಮತ್ತು ಸಮಾರೋಪ ಸಮಾರಂಭಕ್ಕೆ ಆಗಮಿಸಿದ, 'ಕನ್ನಡದ ಪೂಜಾರಿ' ಎಂದೇ ಪ್ರಸಿದ್ಧರಾದ ಶ್ರೀಯುತ ಹಿರೇಮಗಳೂರು ಕಣ್ಣನ್ ಇವರಿಗೂ ನಮ್ಮ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕಾರ್ಯಕ್ರಮದ ಯಶಸ್ಸಿಗೆ ಕೊಡುಗೆ ನೀಡಿದ ಕಾಲೇಜಿನ ಆಡಳಿತ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರಿಗೆ ಸಂಪಾದಕ ಮಂಡಳಿಯು ವಿನಮ್ರಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದೆ. ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳಿಗೆ ಹಾಗು ಸಂಪಾದಕ ಮಂಡಳಿಯ ಜೊತೆಗೆ ||ಶಬ್ದ್||ನ ಸಫಲತೆಗೆ ಶ್ರಮಿಸಿದ ಎಲ್ಲಾ ಸ್ವಯಂಸೇವಕರಿಗು ನಮ್ಮ ತುಂಬು ಹೃದಯದ ಧನ್ಯವಾದಗಳು. ಈ ಬಾರಿಯ ||ಶಬ್ದ್|| ಎಲ್ಲರ ಹೆಗಲಿಗೆ ಹೊಸ ನೆನಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆ ಎಂದು ಭಾವಿಸುತ್ತಾ, ಸಂಪಾದಕ ಮಂಡಳಿಯು ಮುಂಬರುವ ದಿನಗಳಲ್ಲಿ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೂ ನಿಮ್ಮ ಬೆಂಬಲವನ್ನು ಅಪೇಕ್ಷಿಸುತ್ತೇವೆ! . #shabd2023 #jayzine2023 #sjce

6/18/2023, 7:25:56 PM

The Editorial Board, JSSSTU is excited to announce that ||SHABD||-2023 is finally here! Join us for the inauguration at 10:00 AM, on Saturday, 10th June at the IS Sem Hall! . . . #shabd2023 #jayzine2023 #jssstu #literature #shabd #shabdiscoming #art #jcedboard #competitions #mysuru #mysore #sjce #baadalnajudswamy #hiremagalurukannan

6/9/2023, 12:41:20 PM

Join us for an exciting weekend and show us your creativity, brushstrokes, and craftiness! The Editorial Board presents - The Art Events! We have canvas swapping, where artists trade their partially completed artworks and take turns breathing life into their paintings. Don't have a friend to paint with? You can go solo in our painting competition. Think you can capture the perfect moment? Try out our photography competition. Put your craft skills to the test in our collage-making contest and transform faces into living works of art in our face painting competition. We also have something for those who prefer good old-fashioned pencil and paper, our pencil sketching competition. Whether you're a seasoned ||SHABD|| participant, someone who needs an exciting weekend or someone who wants to meet fellow artists, we guarantee you won't be disappointed. Registration link in our bio! Cash prizes await you! . . . #shabd2023 #jayzine2023 #jssstu #literature #shabd #shabdiscoming #art #edboard #competitions #mysuru #painting #creativity #collage

6/6/2023, 10:39:54 AM

The Editorial Board is back with a bang! ||SHABD|| is fast approaching, so get ready to have a blast. The birds rejoice with their coos and the wolves howl in jubilation. ||SHABD|| is where magic unfolds and we all weave an intricate canopy of memories. Our chief guests are Badal Nanjundaswamy and everyone’s beloved Kannan Mama! Badal Nanjundaswamy is a renowned artist with a passion for change, and is most known for turning “public foe number one” — potholes, into stunning pieces of art. Also joining us is our “Kannadada Pujari”, Hiremagaluru Kannan. He’s a man who enthrals audiences of all ages, and is sure to leave you spellbound! Join us on 10th and 11th June, don’t miss out on the fun! English, Kannada and Art – we’ve got ‘em all. For more details, check out our previous posts and keep an eye out on this space for more updates. . ಮೊದಲ ಮಳೆಯ ತವಕದಲ್ಲಿ ಕಾದ ನೆಲವು ಕಾದಂತೆ; ಅಂಕುರವಿಟ್ಟ ಬೀಜದ ಚಿಗುರು ಧೈರ್ಯದಿ ನೆಲವನ್ನೆಬ್ಬಿಸುವಂತೆ; ಸ್ತಬ್ಧವಾದ ಕೋಗಿಲೆಯ ಕಂಠಕ್ಕೆ ವಸಂತವು ಚಿಗುರ ತಂದಂತೆ; ಕಾರ್ಮೋಡದ ಘನತ್ವವನ್ನು ಸಿಡಿದ ಮಿಂಚಿನ ಬೆಳಕು ಪರಿಚಯಿಸುವಂತೆ; ಸಾವಿರ ವಿಘ್ನಗಳ ನಡುವೆ, ಸೂಜಿಮೊನೆಯು ತೇಜದಿ ಹೊಕ್ಕು ನೂಲನ್ನು ಬಟ್ಟೆಯಾಗಿಸುವಂತೆ, ಅನೇಕರ ಸತ್ಯ ಸಂಕಲ್ಪದ ಫಲವಾಗಿ ಸಂಪಾದಕ ಮಂಡಳಿಯು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಲಾ-ಸಾಹಿತ್ಯಿಕ ಪರ್ವ ||ಶಬ್ದ್|| - 2023ರನ್ನು ಇದೇ ತಿಂಗಳ 10 ಮತ್ತು 11ನೇ ತಾರೀಖಿನಂದು ಹಮ್ಮಿಕೊಂಡಿದ್ದು, ನಿಮ್ಮೆಲ್ಲರಿಗು ಆತ್ಮೀಯವಾದ ಸ್ವಾಗತವನ್ನು ಕೋರುತ್ತಿದ್ದೇವೆ. ನಮ್ಮ ಈ ಪರ್ವಕ್ಕೆ, ಕಲೆಯಿಂದಲೇ ಬದಲಾವಣೆಗಳಿಗೆ ಗಾಳ ಹಾಕುವ, ತಮ್ಮ ಬೀದಿ ಚಿತ್ರಕಲೆಯಿಂದಲೇ ಸುಪ್ರಸಿದ್ಧರಾದ ಶ್ರೀ ಬಾದಲ್ ನಂಜುಂಡಸ್ವಾಮಿ ಹಾಗು 'ಹರಟೆ' ಕಾರ್ಯಕ್ರಮದ ಮೂಲಕ ಮನೆ-ಮನೆಗೂ ಚಿರಪರಿಚಿತರಾದ, 'ಕನ್ನಡದ ಪೂಜಾರಿ' ಎಂದೇ ಪ್ರಖ್ಯಾತರಾದ ಶ್ರೀ ಹಿರೇಮಗಳೂರು ಕಣ್ಣನ್‌ರವರು ಮುಖ್ಯ ಅಭ್ಯಾಗತರಾಗಿ ಆಗಮಿಸಲಿದ್ದು, ಹಬ್ಬದ ಎರಡೂ ದಿನಗಳ ಶೋಭೆ ದ್ವಿಗುಣಗೊಳ್ಳಲಿದೆ. ಅಂತೆಯೇ ಕನ್ನಡ, ಆಂಗ್ಲ ಹಾಗೂ ಕಲಾ ಸ್ಪರ್ಧೆಗಳು ನಿಮಗಾಗಿ ಎದುರು ನೋಡುತ್ತಿವೆ. ನಿಮ್ಮೆಲ್ಲರಿಗು ಶುಭ ಸ್ವಾಗತ! . . . #shabd2023 #jayzine2023 #jssstu #literature #shabd #shabdiscoming #art #jcedboard #competitions #mysuru #mysore #sjce #quiz #debate #poetry #creativewriting #loveletterwritting #kannada #english #pictionary #painting #sketching #collage #sketching #photography #crossword #colormixing #literary #literaryfest

6/5/2023, 7:36:10 AM

Join us in the run-up to ||SHABD|| for exciting prefest events! Unleash your creativity with Hand Printing, test your wit in the game of Bamboozled and finally, reminisce your childhood with Musical Chairs 2.0! . ಮೆದುಳಿಗೆ ಮೇವನ್ನು ಕೊಡಲು, ಯೋಚನೆಗೆ ಕಿಚ್ಚು ಹಚ್ಚಲು "ಚಿತ್ರ ಜೋಡಣೆ" ಸ್ಪರ್ಧೆಯು ಇಲ್ಲಿದೆ. ವಿನೋದದಿಂದ ತುಂಬಿದ "ಸಂಗೀತ ಕುರ್ಚಿ"ಯು ಹೊಸ ತಿರುವಿನೊಂದಿಗೆ ಕಾಯುತ್ತಾ, ಹಾಡಿನೊಂದಿಗೆ ಆಡಲು ನಿಮ್ಮೆಲ್ಲರನ್ನು ಕೈಬೀಸಿ ಕರೆಯುತ್ತಿದೆ. "ಹಸ್ತವರ್ಣಿಕೆ"ಯ ಪಟವು ನಿಮ್ಮ ಕೈಗಳಿಗಾಗಿ ಕಾಯುತ್ತಿದೆ. ಇನ್ನೇಕೆ ತಡ! ||ಶಬ್ದ್||-2023ಕ್ಕೆ ಮುನ್ನುಡಿ ಬರೆಯಲು, ಈ ಕಲಾ-ಸಾಹಿತ್ಯಿಕ ಪರ್ವದ ಮೆರಗನ್ನು ಹೆಚ್ಚಿಸಲು, ||ಶಬ್ದ್|| ಸಿನಿಮಾದ ಟ್ರೇಲರ್‌ನಂತಿರುವ ಈ ಪೂರ್ವಭಾವಿ ಕಾರ್ಯಕ್ರಮಗಳಿಗೆ ತಪ್ಪದೇ ನಿಮ್ಮ ಗೆಳೆಯರೊಂದಿಗೆ ಬನ್ನಿ, ಮಜಾ ಮಾಡಿ! ಈ ಉತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ. . . #SHABD #jayzine2023 #art #edboard #UnleashTheFun #asteaste #shabd2023 #sjce #mysore #quiz #debate #painting #sketching #photography #loveletterwriting #literaryfest #prefest #musicalchairs #handprinting #bamboozled

5/29/2023, 9:47:45 AM

It's official! * drumrolls please * ||SHABD|| is back! Volunteers have always been an important part of making ||SHABD|| a great success and we were extremely delighted to meet you all today and share your enthusiasm for ||SHABD|| (and for Gone Mads). The journey leading up to ||SHABD|| will be an exciting one and we can't wait to make cool memories with you in the upcoming weeks. If you missed the meet, fret not, you can join the action directly from tomorrow at 5:30 PM in the Mech Audi! Let's have fun and make ||SHABD|| a grand success together, once again. . ಹೊಸ ಹುರುಪು, ಸಂತಸ, ಸಂಭ್ರಮದೊಡನೆ ||ಶಬ್ದ್|| ಮರಳಿದೆ. ||ಶಬ್ದ್|| 2023ರ ತಯಾರಿಗಳು ಈಗಾಗಲೇ ಪ್ರಾರಂಭವಾಗಿದೆ. ಜೇನು ಹುಳುಗಳಂತೆ ಸಂಪಾದಕರು ಹಾಗು ಸ್ವಯಂಸೇವಕರು ಕೂಡಿ ದುಡಿದರೆ ಯಶಸ್ಸಿನ ಸವಿಜೇನನ್ನು ಸವಿಯುವ ದಿನಗಳು ದೂರವಿಲ್ಲ. ಸಂಪಾದಕ ಮಂಡಳಿಯ ಕರೆಗೆ ಓಗೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು 'ಸ್ವಯಂಸೇವಕರ ಕೂಟ'ದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಸಂಪಾದಕ ಮಂಡಳಿಯ ವತಿಯಿಂದ ಹೃದಯ ಪೂರ್ವಕ ಸ್ವಾಗತ ಹಾಗು ಧನ್ಯವಾದಗಳು. ||ಶಬ್ದ್|| ತಯಾರಿಗೆ ನಾವೂ ಸಿದ್ಧ ನೀವೂ ಸಿದ್ಧ- ಹಾಗಿದ್ದರೆ ತಡವೇತಕೆ? ನೀವು ಬನ್ನಿ ನಿಮ್ಮವರನ್ನೂ ಕರೆತನ್ನಿ, ಎಲ್ಲಾ ಸೇರಿ ಕೂಳೆ ಮಜಾ ಮಾಡೋಣ! . . . #shabd2023 #jayzine2023 #jssstu #shabdiscoming #art #jcedboard #competitions #mysuru #mysore #sjce #quiz #debate #poetry #creativewriting #loveletterwritting #kannada #english #painting #sketching #photography #literary #literaryfest #ashteashte #volunteering

5/15/2023, 4:52:16 PM

If we told you that we have some good news, you’d probably say “Oh, silly! There is just news; there is no good or bad.” Then we’d eagerly say, “Our literary fest ||SHABD|| is coming soon!” Wouldn’t you go “That is indeed, good news?" If yes, then you can volunteer and help us in making ||SHABD|| successful again and to continue its legacy. Volunteers play a huge role in bringing imagination to life, help us in making fun installations while just vibing with the people around you and working together. Give some time for yourself and let go of your mundane schedule, join us in sharing this special journey with you. Volunteers also attain inner peace and free t-shirts! Registration link in bio. Date: 15/05/2023 (Monday) Time: 5:30 p.m. Venue: IS Sem Hall 1 . ಮನುಕುಲದ ಇತಿಹಾಸದ ಬೆನ್ನೆಲುಬೇ ಸಾಹಿತ್ಯ, ಕಲ್ಪನೆಯ ಅಂತರಾಳದಿಂದ ಮೂಡಿಬಂದ ಚಿತ್ತಾರವೇ ಕಲೆ. ಸಂಪಾದಕ ಮಂಡಳಿಯು ಆಯೋಜಿಸುವ ವಾರ್ಷಿಕ ಸಾಹಿತ್ಯಿಕ ಹಾಗು ಕಲಾ ಹಬ್ಬವಾದ ||ಶಬ್ದ್|| 2023ಕ್ಕೆ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿದೆ. ಆದರೆ ಎರಡೂ ಕೈ ಸೇರಿದರೆ ಚಪ್ಪಾಳೆ ಎಂಬಂತೆ ಈ ಪರ್ವವು ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರ ಅತ್ಯವಶ್ಯಕ. ಮೋಜು-ಮಸ್ತಿಯಿಂದ ಕೂಡಿದ ಕಲಾ-ಸಾಹಿತ್ಯಿಕ ಪರ್ವದ ಸಿದ್ಧತೆಯಲ್ಲಿ ನಮ್ಮ ಜೊತೆಯಾಗಲು ಇದೇ ಸೋಮವಾರ, ಮೇ 15ರಂದು, ಐ. ಎಸ್. ಸೆಮಿನಾರ್ ಹಾಲ್-1ರಲ್ಲಿ ನಡೆಯಲಿರುವ 'ಸ್ವಯಂಸೇವಕರ ಕೂಟ'ದಲ್ಲಿ ಭಾಗವಹಿಸಿ, ನಮ್ಮೊಂದಿಗೆ ಕೈ ಜೋಡಿಸಿ. ಖಾತೆಯ 'ಬಯೋ'ದಲ್ಲಿರುವ ಕೊಂಡಿಯ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ! . #shabd2023 #jayzine2023 #jssstu #shabdiscoming #art #jcedboard #competitions #mysuru #mysore #sjce #quiz #debate #poetry #creativewriting #kannada #english #painting #sketching #photography #literary #literaryfest #ashteashte #volunteer #volunteering

5/11/2023, 3:08:11 PM

Peacocks, spiders, bugs and wild jigglypuffs were perplexed to see 30 odd sleep-deprived and hungry humans storm into BGT on a drowsy Sunday morning. Harnessing the powers of yesteryear Eddies, the Eddies swept, dusted and cleaned with all their might. There was only one goal in everyone’s mind — ||SHABD|| (and masala dosa). The birds call in unison as the infectious energy spreads across college. Everyone, buckle up, for ||SHABD|| is back. . ನಿನ್ನೆ ಸುರಿದ ಮಳೆ ಹನಿಗಳು ಇಂಗುವ ಮುನ್ನವೇ, ಇಂದು ತಂಪಾದ ಬೆಳಗಿನ ಜಾವ, ಸಂಪಾದಕರೆಲ್ಲಾ ಒಂದುಗೂಡಿ ಹಳೆ ನೆನಪುಗಳನ್ನೆಲ್ಲಾ ಮೆಲಕು ಹಾಕುತ್ತಾ, ಹಳೆ ಕಲಾಕೃತಿಗಳನ್ನಿಟ್ಟುಕೊಂಡು ಕಥೆ ಕಟ್ಟುತ್ತಾ, ನಿದ್ದೆಗಣ್ಣಿನಲ್ಲಿಯೇ ಧೂಳನ್ನೆಲ್ಲಾ ಸ್ವಚ್ಛಗೊಳಿಸುತ್ತಿರಲು ||ಶಬ್ದ್|| 2023ರ ತಯಾರಿ ಆರಂಭವಾಗಿದೆ. ಅತೀ ಶೀಘ್ರದಲ್ಲಿ ನಡೆಯಲಿರುವ ಈ ವರ್ಷದ ||ಶಬ್ದ್|| ಅಲ್ಲಿ ನಮ್ಮೊಂದಿಗೆ ಜೊತೆಗೂಡಿ ಮೋಜು-ಮಸ್ತಿ ಮಾಡುತ್ತಾ ಇನ್ನಷ್ಟು ಸದ್ದು ಮಾಡಲು ಸಿದ್ಧರಾಗಿರುವಿರೇ? . . . #shabd_2023 #ashteashte #Jayzine2023 #shabd #sjce #jssstu #edboard #fest #mysuru #literature #kannada

5/7/2023, 4:32:27 PM

Do you have a penchant for expressing yourself through words or art? If yes, The Editorial Board summons thee to be a part of this year's edition of our beloved university magazine, Jayzine '23! Poems, stories and essays, written either in English or Kannada, are welcome. Artistic peeps, send in your drawings, sketches, artworks or photographs. Please make sure to submit your work by 28th February, 2023. Head over to the link in our bio to submit them! . ಸಮಯ ಬಂದಾಗ ನಭದಲ್ಲಿನ ಮೇಘಗಳು ತುಂತುರು ವರ್ಷಧಾರೆಯಿಂದ ಇಳೆಯನ್ನು ತಂಪು ಮಾಡುವಂತೆ, ಮುಂಜಾನೆಯಲ್ಲಿ ಹೊಂಬಣ್ಣದ ರವಿಕಿರಣಗಳು ಎಲೆಮರೆಯಲ್ಲಿ ಇಣುಕಿ ಹುಲ್ಲುಗಾವಲಿನ ಮಂಜನ್ನು ಸ್ಪರ್ಶಿಸಿ ಕರಗಿಸುವಂತೆ, ನಿಮ್ಮ ಮನಸ್ಸಿನ ಭಾವನೆಗಳ ಪ್ರವಾಹದಿಂದ ಓದುಗರನ್ನು ಪ್ರಭಾವಿಸಲು ಇದು ಸುವರ್ಣಾವಕಾಶ! ಜಗದ ಒಡಲಿನಲ್ಲಿ ಹುದುಗಿರುವ ವಿಸ್ಮಯಗಳನ್ನು ಹೊರಸೂಸುವ ಛಾಯಾಚಿತ್ರ, ಮನದಾಳದ ಯೋಚನೆಗಳನ್ನು ಕುಂಚದಿಂದ ರಂಗೇರಿಸುವ ಚಿತ್ರಕಲೆ, ಲೇಖನಿಯ ಶಾಯಿಯಿಂದ ನಿಮ್ಮೊಳಗಿನ ಬರಹಗಾರನನ್ನು ಪರಿಚಯಿಸುವ ಕಥೆ, ಕವನ ಮತ್ತು ಲೇಖನಗಳನ್ನು ನಮ್ಮ ಕಾಲೇಜಿನ ವಾರ್ಷಿಕ ಸಂಚಿಕೆಯಾದ 'ಜೇಜ಼ೀನ್ 2023'ರಲ್ಲಿ ಪ್ರಕಟಗೊಳಿಸುವ ಬಯಕೆ ನಿಮಗಿದ್ದಲ್ಲಿ, ನಿಮ್ಮ ರಚನೆಗಳನ್ನು ನಮ್ಮ 'ಬಯೋ'ದಲ್ಲಿನ ಕೊಂಡಿಯ ಮೂಲಕ ಸಲ್ಲಿಸಿ. . . . #jayzine23 #jayzine2023 #jssstu  #sjce #literature #art #photography #poetry #writing #articles

2/4/2023, 5:33:56 AM

Add your share of colours and flavours to our beloved university magazine, Jayzine, by showcasing your words and shedding light on your artworks! The Editorial Board is now accepting submissions for Jayzine '23. Those of you who like to write to express yourselves are welcome to send in your articles, poems, stories and essays written in either English or Kannada. Artsy folks can send us drawings, sketches, photographs and artworks! Submit your work through the link in our bio for a chance to be featured in the magazine. . ಭಾವನೆಗಳೆಂಬ ಮುಂಗಾರಿನ ಮಳೆಯು ಧಾವಂತದಿ ಸುರಿಯಲು; ನಿಮ್ಮ ಮನವೆಂಬ ಕೆರೆಯು ಕೋಡಿ ಬಿದ್ದಿಹುದೇ? ಎತ್ತ ಹರಿಬಿಡಲಯ್ಯ ಎನ್ನ ಮನದ ಭಾವಗಳೆನೆ, ಇಗೋ ಇಲ್ಲಿದೆ ನೋಡಯ್ಯ 'ಜೇಜ಼ೀನ್' ಎಂಬ ಪ್ರಭಾವನೆ! ನಮ್ಮ ಕಾಲೇಜಿನ ವಾರ್ಷಿಕ ಸಂಚಿಕೆಯಾದ 'ಜೇಜ಼ೀನ್', ನಿಮ್ಮ ವಿಚಾರ ಲಹರಿಯಿಂದ ಹೊಸ ಬಣ್ಣ ಪಡೆಯಲು ಸಜ್ಜಾಗಿ ನಿಂತಿದೆ. ನಿಮ್ಮ ಮನದೂರಿನಲ್ಲಿರುವ ಕಂಪನ್ನು ಕವನ, ಲೇಖನ, ಕಥೆಗಳ ರೂಪದಲ್ಲಿ ನಮಗೆ ಕಳುಹಿಸಬಹುದು. ಬಣ್ಣಗಳ ಮಂಥನದಲ್ಲಿ ಸೃಷ್ಟಿಯಾದ ಚಿತ್ರಕಲೆಗಳಾಗಲಿ ಅಥವಾ ಸುಂದರತೆಯನ್ನು ಸೆರೆ ಹಿಡಿದ ಛಾಯಾಚಿತ್ರಗಳನ್ನಾಗಲಿ 'ಜೇಜ಼ೀನ್-2023'ರಲ್ಲಿ ಹಂಚಿಕೊಳ್ಳುವ ಆಸೆ ನಿಮ್ಮದಾದಲ್ಲಿ, ನಿಮ್ಮ ರಚನೆಗಳನ್ನು ನಮ್ಮ 'ಬಯೋ'ದಲ್ಲಿರುವ ಕೊಂಡಿಯ ಮೂಲಕ ಸಲ್ಲಿಸಿ, 'ಜೇಜ಼ೀನ್-2023'ರ ಭಾಗವಾಗಿ! . . . #jayzine23 #jayzine2023 #jssstu #sjce #literature #art #photography #poetry #writing #articles

10/30/2022, 1:30:35 PM